Subject : Current Affair
ಕೇಂದ್ರ ಸಾಹಿತ್ಯ ಅಕಾಡೆಮಿಯ 2023 ನೇ ಪ್ರಶಸ್ತಿ - ಲಕ್ಷ್ಮೀಶ ತೋಳ್ಪಾಡಿ

2023 ನೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
2023 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಲಕ್ಷ್ಮೀಶ ತೋಳ್ಪಾಡಿ ಯವರು ಆಯ್ಕೆಯಾಗಿದ್ದಾರೆ.
ಅವರ ಕೃತಿ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’
ಈ ಕೃತಿಗೆ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.
ಲಕ್ಷ್ಮೀಶ ತೋಳ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು.
ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನವಾಗಿದ್ದು, ತುಳು ಆಡುಭಾಷೆಯಾಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಯು ಭಾರತದ ರಾಷ್ಟ್ರೀಯ ಅಕ್ಷರಗಳ ಅಕಾಡೆಮಿ ಯಾಗಿರುತ್ತದೆ
ವಾರ್ಷಿಕವಾಗಿ ಭಾರತೀಯ ಸಂವಿಧಾನದ 8 ನೇ ಶೆಡ್ಯೂಲ್‌ನ 22 ಭಾಷೆಗಳಲ್ಲಿ,
ಯಾವುದೇ 22 ಭಾಷೆಗಳಲ್ಲಿ ಪ್ರಕಟವಾದ ಸಾಹಿತ್ಯಿಕ ಅರ್ಹತೆಯ ಅತ್ಯುತ್ತಮ ಪುಸ್ತಕಗಳ ಬರಹಗಾರರಿಗೆ ಪ್ರದಾನ ಮಾಡುತ್ತದೆ.
ಕನ್ನಡದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು.
1) 1955 ರಲ್ಲಿ ಮೊದಲು ಕುವೆಂಪು ಅವರಿಗೆ-
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ
2) 1956 ರಲ್ಲಿ – ಆರ್ ಎಸ್ ಮುಗಳಿ - ಕನ್ನಡ ಸಾಹಿತ್ಯ ಚರಿತ್ರೆ ಸಾಹಿತ್ಯದ ಇತಿಹಾಸ
3) 2020 ರಲ್ಲಿ ವೀರಪ್ಪ ಮೊಯ್ಲಿ
ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ ಮಹಾಕಾವ್ಯ
4) 2021 ರಲ್ಲಿ – ಡಿ.ಎಸ್.ನಾಗಭೂಷಣ ಗಾಂಧಿ ಕಥನ ಜೀವನಚರಿತ್ರೆ
5) 2022 ರಲ್ಲಿ = ಮುಡ್ನಾಕೂಡು ಚಿನ್ನಸ್ವಾಮಿ
ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’
6) 2023 ರಲ್ಲಿ = ಲಕ್ಷ್ಮೀಶ ತೋಳ್ಪಾಡಿ ಮಹಾಭಾರತ ಅನುಸಂಧಾನದ ಭಾರತಯಾತ್ರೆ