Subject : HISTORY
ವಿಜಯನಗರ ಸಾಮ್ರಾಜ್ಯ :- ಕ್ರಿ.ಶ 1336 - 1646

ವಿಜಯನಗರ ಸಾಮ್ರಾಜ್ಯ (ಕ್ರಿ. ಶ) 1336 - 1646
Ôಸ್ಥಾಪಕರು :- ಹಕ್ಕಬುಕ್ಕ (1 ನೇ ಹರಿಹರ ಮತ್ತು 1 ನೇ ಬುಕ್ಕರಾಯ)
Ô ಲಾಂಛನ :- ವರಹ ( ಎರಡು ಮುಖದ ವರಹ)
Ô ರಾಜಧಾನಿ :-
1. ಆನೆಗುಂದಿ (ಕೊಪ್ಪಳ)
2. ಹಂಪಿ (ವಿಜಯನಗರ) (ಕಿಷ್ಕಿಂದ)
3. ಪೆನುಗೊಂಡ (ಆಂಧ್ರಪ್ರದೇಶ )
4. ಚಂದ್ರಗಿರಿ (ಆಂಧ್ರಪ್ರದೇಶ )
5. ವೆಲ್ಲೂರು (ತಮಿಳುನಾಡು )
Ô ಗುರು - ವಿದ್ಯಾರಣ್ಯರು
Ôಹಂಪಿಯು - ತುಂಗಭದ್ರಾ ನದಿಯ ಬಲದಂಡೆಯ ದಕ್ಷಿಣ ದಿಕ್ಕಿಗಿದೆ. UNESCO ಪಟ್ಟಿಗೆ - 1986ರಲ್ಲಿ ಸೇರ್ಪಡೆಗೊಂಡಿತು.
Ôಧರ್ಮ :- ಹಿಂದೂ ಧರ್ಮ
Ôಆಡಳಿತ ಭಾಷೆ :- ತೆಲುಗು ಮತ್ತು ಕನ್ನಡ
Ôನ್ಯಾಯಾಲಯದ ಭಾಷೆ :- ಕನ್ನಡ
ಒಟ್ಟು ನಾಲ್ಕು ಸಂತತಿಗಳು :- ವಿಜಯನಗರ ಸಾಮ್ರಾಜ್ಯ ಆಳಿದ ನಾಲ್ಕು ಮನೆತನಗಳು:-
1. ಸಂಗಮ - ಕ್ರಿ.ಶ (1336 - 1485 )
2. ಸಾಳುವ - ಕ್ರಿ.ಶ (1485-1505)
3. ತುಳುವ - ಕ್ರಿ.ಶ (1505-1570)
4. ಅರವೀಡು - ಕ್ರಿ.ಶ (1570-1646)
Ôನಾಣ್ಯಗಳು :- ಹೊನ್ನು, ವರಹ (ಬಂಗಾರದ ನಾಣ್ಯ)
Ôವಿಜಯನಗರ ಸಾಮ್ರಾಜ್ಯವನ್ನು ಆಳಿದ ಮನೆತನಗಳಲ್ಲಿ ಅತಿ ಹೆಚ್ಚು ಅವಧಿ ಆಳ್ವಿಕೆ ಮಾಡಿರುವ ಸಂತತಿ - ಸಂಗಮ ಸಂತತಿ.
1. ಸಂಗಮ ಸಂತತಿ :- (1336-1485)
1 ನೇ ಹರಿಹರ :- ಪ್ರಸಿದ್ಧ ದೊರೆ ಈತ ಹೊಯ್ಸಳರನ್ನು ಸೋಲಿಸಿ ಅಧಿಕಾರಕ್ಕೆ ಬಂದನು, ಬುಕ್ಕರಾಯ ಮತ್ತು ಎರಡನೇ ಹರಿಹರ ಮತ್ತು ಪ್ರೌಢರಾಯ ಆಳಿದರು.
ಬುಕ್ಕರಾಯ :- ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳುಹಿಸಿದ್ದನು. ಬಿರುದು - "ವೇದ ಮಾರ್ಗ ಪ್ರತಿಷ್ಠಾಪಕ"
"ಕನ್ನಡದ ವಿದ್ಯವಿಲಾಸ" - ಕನ್ನಡದ ಮೇಲೆ ಆಸಕ್ತಿ ಹೊಂದಿದ್ದನು.
2 ನೇ ದೇವರಾಯ (ಪ್ರೌಢದೇವರಾಯ):- ಸಂಗಮ ವಂಶದಲ್ಲಿ ಶ್ರೇಷ್ಠ ದೊರೆ ಬಿರುದು - ಗಜ ಬೆಂಟೆಕಾರ
# ದಕ್ಷಿಣ ಪಥ-ಚಕ್ರವರ್ತಿ (ದಕ್ಷಣದಲ್ಲಿ ವಿಜಯ)
# ಈತ ಇಸ್ಲಾಂ ಬಾಂಧವರಿಗೆ ಬೆಂಬಲಿಸುವದಕ್ಕಾಗಿ ತನ್ನ ಸಿಂಹಾಸನದ ಪಕ್ಕದಲ್ಲಿ ಕುರಾನ್ ಗ್ರಂಥವನ್ನು ಇಟ್ಟು ಆಳ್ವಿಕೆ ಮಾಡಿದನು.
# ಕಮಲ್ ಮಹಲ್ ಕಟ್ಟಡವನ್ನು ನಿರ್ಮಿಸಿದನು,
# "ಮಹಾನಾಟಕ ಸುಧಾನಿಧಿ ಗ್ರಂಥ" ರಚಿಸಿದನು.
ವಿದೇಶಿ ಯಾತ್ರಿಕ --- ಪಶಿ೯ಯಾ ದೇಶದ - "ಅಬ್ದುಲ್ಲ ರಜಾಕ್" ಭೇಟಿ ನೀಡಿದನು. ಜಗತ್ತಿನಲ್ಲಿ ವಿಜಯನಗರ ಸಾಮ್ರಾಜ್ಯದಂತಹ ಸಾಮ್ರಾಜ್ಯ ಕಣ್ಣಾರೆ ಕಂಡಿಲ್ಲ, ಕಿವಿಯಾರೇ ಕೇಳಿಲ್ಲ ಎಂದು ಹೇಳಿದನು.
2ನೇ ವಿರುಪಾಕ್ಷಿ :-ವಿದೇಶಿ ಯಾತ್ರಿಕ:- ರಷ್ಯಾ ದೇಶದ ನಿಕೇಟಿನ್ ಭೇಟಿ ನೀಡಿದನು.
ಸಂಗಮ ಸಂತತಿಯ ಕೊನೆಯ ಅರಸ :- ಪ್ರೌಢರಾಯ
2) ಸಾಳ್ವ ಸಂತತಿ (ಕ್ರಿ.ಶ 1485 - 1505)
ಅತ್ಯಂತ ಕಡಿಮೆ ಅವಧಿ ಆಳ್ವಿಕೆ ಮಾಡಿದ ಸಂತತಿಯಾಗಿದೆ.
Ô ಸ್ಥಾಪಕ :- ಸಾಳ್ವ ನರಸಿಂಹ
3) ತುಳುವ ಸಂತತಿ :- (ಕ್ರಿ. ಶ 1509 - 1529)
Ôತುಳುವ ಸಂತತಿಯು ಪ್ರಸಿದ್ಧ ಸಂತತಿಯಾಗಿದೆ,
Ôಸ್ಥಾಪಕ :- ವೀರ ನರಸಿಂಹ
a). ಶ್ರೀ ಕೃಷ್ಣದೇವರಾಯ (ಕ್ರಿ.ಶ. 1509 - 1529):- ಪ್ರಸಿದ್ಧ ಅರಸ
Ôತಂದೆ - ನರಸನಾಯಕ
Ô ತಾಯಿ - ನಾಗಲಾದೇವಿ ----ಇವಳ ನೆನಪಿಗಾಗಿ "ನಾಗಲಾಪುರ" (ಹೊಸಪೇಟೆ) ಎಂಬ ನಗರ ನಿರ್ಮಿಸಿದನು.
Ôಗುರು - ವ್ಯಾಸರಾಯರು
Ôರಾಣಿಯರು -1. ಜಗನ್ಮೋಹಿನಿ
2. ತಿರುಮಲದೇವಿ,
3. ಚಿನ್ನಾದೇವಿ
ರಾಬರ್ಟ್ ಸ್ಯುಯಲ್ ಹೇಳುವಂತೆ "ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ, ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ"ಎಂದು ವರ್ಣಿಸಿದ್ದಾನೆ.
Ô ಪ್ರಮುಖ ಬಿರುದುಗಳು :-1. ಆಂಧ್ರಬೋಜ
2. ಕರ್ನಾಟಕ ರಾಜ್ಯ ರಮ ರಮಣ
3. ರಾಜ ಲಕ್ಷ್ಮಿ - ಮನೋಹರ
4. ಕವಿ-ಪುಂಗವ
5. ಮನೋ - ಭಯಂಕರ
6. ಯವನ - ರಾಜ್ಯ ಪ್ರತಿಷ್ಠಾಪನಾಚಾರ್ಯ
Ôಸಾಧನೆಗಳು :-
1.ಕ್ರಿ.ಶ 1509 ದೋಣಿ ಕಾಳಗ - ಬಹುಮನಿ ಅರಸ:ಮೊಹಮ್ಮದ್ ಷಾನನ್ನು ಸೋಲಿಸಿದ.
2.ಕ್ರಿ.ಶ 1510 ಕೊವಿಕೊಂಡ ಯುದ್ಧದಲ್ಲಿ ಬಿಜಾಪುರದ ಯೂಸುಫ್ - ಆದಿಲ್- ಪಾನನ್ನು ಸೋಲಿಸಿದನು. 3. ಕ್ರಿ.ಶ. 1512 - ಬಿಜಾಪುರದ ಇಸ್ಮಾಯಿಲ್ ಆದಿಲ್ ಶಾಹಿಯನ್ನು ಸೋಲಿಸಿ,ರಾಯಚೂರಿನ ದೋ- ಅಬ್ ಪ್ರದೇಶವನ್ನು ವಶಪಡಿಸಿಕೊಂಡನು.
4.ಕ್ರಿ.ಶ ದೇಶ 1512 - ಉಮತ್ತೂರಿನ ಗಂಗರಾಜನನ್ನು ಸೋಲಿಸಿದನು.
5. ಕ್ರಿ.ಶ 1513- ಉದಯಗಿರಿ ವಶಪಡಿಸಿಕೊಂಡನು (ಇದರ ನೆನಪಿಗಾಗಿ ಹಂಪಿಯಲ್ಲಿ ಕೃಷ್ಣ ಸ್ವಾಮಿ ದೇವಾಲಯವನ್ನು ನಿರ್ಮಿಸಿದನು.)
6. ಕ್ರಿ.ಶ 1513 ರಿಂದ 1518 ರವರೆಗೆ - ಒಡಿಸ್ಸಾದ ಮೇಲೆ ದಾಳಿ ಮಾಡಿ ಗಜಪತಿ ರುದ್ರನನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದನು.
( ಇದರ ನೆನಪಿಗಾಗಿ ಹಂಪಿಯಲ್ಲಿ ವಿಜಯ ವಿಠ್ಠಲ ದೇವಾಲಯ ಮತ್ತು ಮಹಾನವಮಿ ದಿಬ್ಬ ಎಂಬ ಕಟ್ಟಡವನ್ನು ನಿರ್ಮಿಸಿದನು.
7. ಕ್ರಿ.ಶ. 1520- ಬಿಜಾಪುರದ ಇಸ್ಮಾಯಿಲ್ ಆದಿಲ್ ಶಾಹಿಯನ್ನು ಸೋಲಿಸಿ, ರಾಯಚೂರು ಕೋಟೆಯನ್ನು ವಶಪಡಿಸಿಕೊಂಡನು.
8.ಕ್ರಿ.ಶ 1522 - ಬಹಮನಿ ಸಾಮ್ರಾಜ್ಯದ ಮಂತ್ರಿ - ಅಮೀರ್ ಬರೀದ್ ನನ್ನು ಸೋಲಿಸಿ ಬಹುಮನಿ ಸಿಂಹಾಸನ ಬಹುಮನಿ ಅರಸರಿಗೆ ದೊರೆಯುವಂತೆ ಮಾಡಿ "ಯಮನ ರಾಜ್ಯ ಪ್ರತಿಷ್ಠಾಪನಾಚಾರ್ಯ"ಎಂಬ ಬಿರುದು ಪಡೆದನು.
9. ಈತ ತೆಲುಗು ಭಾಷೆಯಲ್ಲಿ:- ಅಮುಕ್ತ ಮೌಲ್ಯದ
ಸಂಸ್ಕೃತಿ ಭಾಷೆಯಲ್ಲಿ:-ಜಾಂಬವತಿ ಕಲ್ಯಾಣ
-ಉಷಾ ಪಣಯo
-ರಸಾಮಂಜರಿ
-ಮದಲಸಾಚರಿತಂ ಎಂಬ ಚರಿತಂ ಎಂಬ ಗ್ರಂಥಗಳನ್ನು ರಚಿಸಿದನು.
Ôಈತನ ಆಸ್ಥಾನದಲ್ಲಿ ಅಷ್ಟ ದಿಗ್ಗಜರು ಎಂಬ ಕವಿಗಳ ಕೂಟ ಇತ್ತು.
1.ಅಲ್ಲ ಸಾನಿ ಪೆದ್ದಣ್ಣ
2. ಪಿಂಗಳ್ಳಿ ಸುರಣ್ಣ
3. ನಂದಿ ತಿಮ್ಮಣ್ಣ
4. ತೆನಾಲಿ ರಾಮಕೃಷ್ಣ
5. ರಾಮಭಧಾ
6. ಮದಾಯಗಾರ ಮಲ್ಲಣ್ಣ
7. ಅಯ್ಯಲಾರಾಜ
8. ದಾರ್ಜಿಟಿ
Ôವಿದೇಶಿ ಯಾತ್ರಿಕ :-
#ಕ್ರಿ.ಶ. 1514 - ಬಾರ್ಬೋಸಾ
#ಕ್ರಿ.ಶ 1520 - ದೋಮಿಂಗೋ ಪಾಯಸ್
#ಕ್ರಿ.ಶ 1529 -ಮರಣ ಹೊಂದಿದನು
Ôಸಮಾಧಿ - ಆನೆಗುಂದಿ.
b). ಅಚ್ಯುತರಾಯ (ಕ್ರಿ.ಶ 1529 -1543):- ವಿದೇಶಿ ಯಾತ್ರಿಕ -ಕ್ರಿ.ಶ. 1535 - ಪೋರ್ಚುಗಲ್ ದ- ನ್ಯೂನಿಜ್ ಭೇಟಿ ನೀಡಿದನು.
c). ಸದಾಶಿವರಾಯ (ಕ್ರಿ.ಶ 1543 - 1570) ಈತ ಹೆಸರಿಗೆ ಮಾತ್ರ ಅರಸನಾಗಿದ್ದ, ಸಮರ್ಥ ಆಡಳಿತ ಅಳಿಯ ರಾಮರಾಯನ ಕೈಯಲ್ಲಿತ್ತು.
Ôಈತನ ಕಾಲದಲ್ಲಿ "ತಾಳಿಕೋಟೆ ಯುದ್ಧ" ನಡೆಯಿತು.
Ôತಾಳಿಕೋಟೆ ಯುದ್ಧ (ಕ್ರಿ.ಶ. 1565 - ಜನೇವರಿ 23) ಮಂಗಳವಾರ ಈ ಯುದ್ಧವನ್ನು "ರಕ್ಕಸ ತಂಗಡಿ ಯುದ್ಧ"ಮತ್ತು ಬನಹಟ್ಟಿ ಕಾಳಗ ಎನ್ನುವರು.
^ಯುದ್ಧಕ್ಕೆ ಕಾರಣಗಳು :=
# ಮುಸ್ಲಿಂ ಅರಸನ ಐಕ್ಯತೆ
# ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆ
# ಅಳಿಯ ರಾಮರಾಯನ ವಿದೇಶಾಂಗ ನೀತಿ
# ರಾಯಚೂರು ಕೋಟೆಗಾಗಿ ಮತ್ತು ದೋ - ಅಬ್ ಪ್ರದೇಶಕ್ಕಾಗಿ (ತತ್ ಕ್ಷಣದ ಕಾರಣ)
^ಯುದ್ಧದಲ್ಲಿ ಭಾಗವಹಿಸಿದವರು
*ವಿಜಯನಗರ ಸೈನ್ಯದ ಮುಖ್ಯಸ್ಥ - ಅಳಿಯ ರಾಮರಾಯ ---- ಈತನ ಸಹಾಯಕ್ಕಾಗಿ ಮುಂದೆ ಬಂದ ಸಹೋದರರು ತಿರುಮಲಾಯ ಮತ್ತು ವೆಂಕಟಾದ್ರಿ
*ದಖ್ಖನಿನ 4 ಮನೆತನಗಳು:-
ಬಿಜಾಪುರದ - ಆದಿಲ್ ಶಾಹಿ
ಗೋಲ್ಕಂಡ - ಕುತುಬ್ ಜಾಹಿ
ಅಹಮದ್ ನಗರ - ನಿಜಾಮಶಾಹಿ
ಬೀದರ್ ನಗರ - ಬರೀದ್ ಶಾಹಿ ----ಈ ಶಾಹಿ ಮನೆತನದ ಮುಖ್ಯಸ್ಥ ಹುಸೇನ್ ನಿಜಾಮ.
*ಈ ಯುದ್ಧದಲ್ಲಿ ಭಾಗವಹಿಸದೇ ಇರುವ ಷಾಹಿ ಮನೆತನ - "ಬಿರಾರ್ ನ ಇಮ್ಮದ್ ಷಾಹಿ".
# ದಖ್ಖನಿನ 4 ರಾಜ್ಯಗಳ ಒಕ್ಕೂಟ ಸೈನ್ಯವು ವಿಷಯನಗರದ ಮೇಲೆ ತಾಳಿಕೋಟೆ ಸಮೀಪ ರಕ್ಕಸಗಿ ಮತ್ತು ತಂಗಡಗಿ ಗ್ರಾಮಗಳ ನಡುವೆ ದಾಳಿ ಮಾಡಿತು.
# ಇದರಲ್ಲಿ ರಾಮರಾಯನ ಸೈನ್ಯ ಸೋತು ಹತನಾದನು.
# ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು, ದಖ್ಖನ್ನಿನ ಸೈನ್ಯವು ವಿಜಯನಗರವನ್ನು ಕೊಳ್ಳೆ ಹೊಡೆಯಿತು, ಹಂಪಿ ಹಾಳು ಮಾಡಲಾಯಿತು.
# ಕ್ರಿ.ಶ. 1646 ರವರೆಗೆ ಅರವೀಡು ವಂಶದ ಆಡಳಿತ ಮುಂದುವರೆಯಿತು.
Ô ವಿದೇಶಿ ಯಾತ್ರಿಕ :- " ಫ್ರೆಡರಿಕ್ ಶಿಜರ್" ಭೇಟಿ ನೀಡಿ ಹಂಪಿ ಹಾಳು ಕೊಂಪೆಯಾಗಿದೆ. ಹಂಪಿಯಲ್ಲಿ ಯಾವ ನರ ಪೀಳ್ಳೆಗಳಿಲ್ಲ. ಆನೆ, ಹುಲ್ಲಿ, ಸಿಂಹ, ಕರಡಿ ಮುಂದಾದ ಕಾಡು ಪ್ರಾಣಿಗಳು ವಾಸಿಸುತ್ತಿದ್ದವು. ಎಂದು ಹೇಳಿದನು.(ತಾಳಿಕೋಟಿ ಯುದ್ಧ ಮುಕಿದ ನಂತರ).
4).ಅರವೀಡು ಸಂತತಿ (ಕ್ರಿ.ಶ. 1570 -1646)
Ôಸ್ಥಾಪಕ - ತಿರುಮಲರಾಯ
Ôರಾಜಧಾನಿ - ಪೆನುಗೊಂಡ ಮತ್ತು ಚಂದ್ರಗಿರಿ
#ಈತ ಸದಾಶಿವನನ್ನು ಕೊಲೆ ಮಾಡಿ ಅರವೀಡು ಮನೆತನಕ್ಕೆ ಅಡಿಪಾಯ ಹಾಕಿದನು.
Ôಕೊನೆಯ ಅರಸ - 3 ನೇ ಶ್ರೀ ರಂಗ
Ôಆಡಳಿತ ವ್ಯವಸ್ಥೆ:-
#ಅರಸ ಆಡಳಿತದ ಕೇಂದ್ರ ಬಿಂದುವಾಗಿದ್ದ.
#ತಿಮ್ಮರಸ- ಮಹಾಪ್ರದಾನ ಮಂತ್ರಿಯಾಗಿದ್ದನು.
# ಸಾಮ್ರಾಜ್ಯವು ರಾಜ್ಯ (ರಾಜ) ನಾಡು ಹಾಗೂ ಗ್ರಾಮ (ಕರಣಿಕ, ತಳವಾರ) ಗಳೆಂಬ ಆಡಳಿತ ಘಟಕಗಳನ್ನು ಹೊಂದಿತ್ತು.
# ಸಾಮಂತರಿಂದ ಆಳಲ್ಪಡುತ್ತಿದ್ದ ಪ್ರಾಂತೀಯ ಆಡಳಿತ ವ್ಯವಸ್ಥೆಯ ಘಟಕವನ್ನು ನಾಯಂಕರಿ ಪದ್ಧತಿ ಎನ್ನುವರು.
Ôಆರ್ಥಿಕ ವ್ಯವಸ್ಥೆಯ ಪ್ರಮುಖ ತೆರಿಗೆಗಳು :-
1. ನಗದು ರೂಪದ ಕಂದಾಯ - ಸುವರ್ಣ ಆದಾಯ.
2. ಬ್ರಾಹ್ಮಣರಿಗೆ ನೀಡಿದ ದತ್ತಿ- ಬ್ರಹ್ಮ ಆದಾಯ
3. ದೇವಾಲಯಗಳಿಗೆ ನೀಡಿರುವ ದತ್ತಿ - ದೇವರಾಯ
4. ದವಸ ಧಾನ್ಯ - ದವಸಾದಾಯ, ಇತರೆ ಮಾಳಿಗೆ ಆದಾಯ, ದೇವಾಸಾದಾಯ, ಮಾಮೂಲು ಆದಾಯ, ಸ್ಥಳ ಆದಾಯ
ಮತ್ತು ಮಾರ್ಗ ಆದಾಯ ಇದ್ದವು. ಕೃಷಿಕರು ಸಾಮಾನ್ಯವಾಗಿ ತಮ್ಮ ಉತ್ಪಾದನೆಯ ನಾಲ್ಕನೆಯ ಒಂದು ಭಾಗ (1/4)
ಭಾಗವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದರು. ಅನಂತಪುರ್ ಜಿಲ್ಲೆಯ ಕರೂರ್ - ಪ್ರಮುಖ ವಜ್ರದ ಕೇಂದ್ರವಾಗಿತ್ತು.
Ôಕಲೆ ಮತ್ತು ವಾಸ್ತು ಶಿಲ್ಪ:-
#ವಾಸ್ತುಶಿಲ್ಪದ ಶೈಲಿ - ದ್ರಾವಿಡ ಶೈಲಿ.
#ಹಂಪಿಯಲ್ಲಿನ ಪ್ರಮುಖ ದೇವಾಲಯ ಗಳು :- 1. ವಿರುಪಾಕ್ಷಿ ದೇವಾಲಯ
2. ವಿಜಯ ವಿಠ್ಠಲ ದೇವಾಲಯ
3. ಕೃಷ್ಣ ಸ್ವಾಮಿ ದೇವಾಲಯ
4. ಹಜಾರ ರಾಮಸ್ವಾಮಿ ದೇವಾಲಯ ಮುಂತಾದವು.
Ôಸಾಹಿತ್ಯ:-
# ಗಂಗಾದೇವಿ - ಮದುರಾ ವಿಜಯಂ ಅಲ್ಲಸಾಮಿ ಪೆದ್ದಣ - ಮನುಚರಿತಂ
# ತೆನಾಲಿ ರಾಮಕೃಷ್ಣ- ಪಾಂಡುರಂಗ ವಿಠ್ಠಲ ಮಹಾತ್ಮ
# ನಂದಿ ತಿಮ್ಮಣ್ಣ - ಪಾರಿಜಾತಹರಣ
# ಈ ಸಾಮ್ರಾಜ್ಯವನ್ನು ಕುರಿತು:- ರಾಬರ್ಟ್ ಸೆವೆಲ್ - ಮರೆತು ಹೋದ ಸಾಮ್ರಾಜ್ಯ ಎಂದು ಕರೆದನು.
ಸೂರ್ಯನಾರಾಯಣ್ - ಮರೆಯಲಾಗದ ಸಾಮ್ರಾಜ್ಯ. ಲೇಪಾಕ್ಷಿ - ಶೈವರ ಅಜಂತಾ.