Ayra Notes

Subject : Geography

ಭಾರತದ ಸ್ವಾಭಾವಿಕ ಸಸ್ಯವರ್ಗ

  • Jan 16,2024
Blog Image

ಭಾರತದ ಸ್ವಾಭಾವಿಕ ಸಸ್ಯವರ್ಗ:-

►ಮಾನವನ ಹಸ್ತಕ್ಷೇಪವಿಲ್ಲದೆ ತನ್ನಿಂದ ತಾನೇ ಉದ್ಭವವಾಗುವ ಗಿಡಗಳ  ಸಮೂಹಕ್ಕೆ ಸ್ವಾಭಾವಿಕ ಸಸ್ಯ ವರ್ಗ ಎನ್ನುವರು.
* ಡೆಂಡ್ರಾಲಿಜಿ  -ಮರಗಳ ಬಗ್ಗೆ ಅಧ್ಯಯನ
* ಭಾರತದ ಅರಣ್ಯ ಸಂಶೋಧನಾ ಕೇಂದ್ರ - ಡೆಹರಾಡೂನ್ (ಉತ್ತರಖಂಡ)
* ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ - MP
*  ಜೂನ್ 5 - ವಿಶ್ವ ಪರಿಸರ ದಿನಾಚರಣೆ
* ಮಾರ್ಚ್ 21 ವಿಶ್ವ ಅರಣ್ಯ ದಿನಾಚರಣೆ.

ಭಾರತದ ಅರಣ್ಯ ಪ್ರಕಾರಗಳು:--

1. ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು / ಸದಾ ಹಸಿರು ಕಾಡುಗಳು / Tropical Evergreen Forests

 ►ಉಷ್ಣಾಂಶ :- 25° - 27° ಸೆ.
 ►ಮಳೆಯ ಪ್ರಮಾಣ :- 250 cm ವಾರ್ಷಿಕ ಮಳೆ ಇರುವ ಕಡೆ ಈ ಅರಣ್ಯಗಳು ಕಂಡುಬರುತ್ತವೆ.

ವಿಶೇಷತೆ :-
# ಈ ಕಾಡುಗಳು ಅಧಿಕ ಮಳೆ, ಹೆಚ್ಚು ಉಷ್ಣಾಂಶ, ಅಧಿಕ ತೇವಾಂಶ ವಿರುವ ಪ್ರದೇಶಗಳಲ್ಲಿ ಬೆಳೆಯುತ್ತವೆ.
# ಇಲ್ಲಿನ ಮರಗಳು ಸುಮಾರು 60m ಗಿಂತ ಎತ್ತರ ಬೆಳೆದಿರುತ್ತವೆ.                                                                  # ಈ ಮರಗಳು ತುಂಬಾ ಹತ್ತಿರದಲ್ಲಿ ಒಂದಕ್ಕೊಂದು ಬಳ್ಳಿಗಳಿಂದ ಸುತ್ತುವರೆದಿದ್ದು, ಒಂದು ಮತ್ತೊಂದಕ್ಕೆ ಚಪ್ಪರಿದಂತೆ ಎಳೆದುಕೊಂಡಿರುವುದರಿಂದ ಸೂರ್ಯನ ಬೆಳಕು ಭೂಮಿಗೆ ತಲುಪುವುದಿಲ್ಲ.                                                         * ಸಸ್ಯವರ್ಗ - ಎಬೋನಿ,  ಮಹಾಗನಿ, ರಬ್ಬರ್, ತೇಗ,
 ಸಿಂಕೋನಾ, ಬಿದಿರು ಇತ್ಯಾದಿ,
 * ಪ್ರಾಣಿ ವರ್ಗ :- ಆನೆ, ಕರಡಿ, ಹುಲಿ,ಸಿಂಹ, ಅನೇಕ ವಿಷಕಾರಿ ಜಂತುಗಳು ಇತ್ಯಾದಿ
►ಉದಾಹರಣೆ :- ಕರ್ನಾಟಕದ ಆಗುಂಬೆಯಲ್ಲಿ ಅತಿ ಹೆಚ್ಚು ಕಾಳಿಂಗ ಸರ್ಪಗಳು ಕಂಡುಬರುತ್ತವೆ.
 * ರಾಜ್ಯಗಳು :-  ಪಶ್ಚಿಮ ಘಟ್ಟದ ಕೆಲವು ರಾಜ್ಯಗಳು ಮತ್ತು ಈಶಾನ್ಯದ ರಾಜ್ಯಗಳು.

2. ಉಷ್ಣವಲಯದ ಎಲೆ ಉದುರುವ ಕಾಡುಗಳು/ ಮಾನ್ಸೂನ್ ಮಾದರಿಯ ಕಾಡುಗಳು.(Mansoon Diciduous Forests).
* ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಕಾಡುಗಳು.
*ಉಷ್ಣಾಂಶ:-28° c
* ಮಳೆಯ ಪ್ರಮಾಣ :- 100 - 200cm ಮಳೆ ಇರುವ ಕಡೆ ಕಂಡು ಬರುತ್ತವೆ.
ವಿಶೇಷತೆಗಳು :-
# ಗಿಡಗಳು 40 m ಎತ್ತರಕ್ಕೆ ಬೆಳೆದಿರುವುದು.
# ಗಿಡಗಳು ದಪ್ಪವಾದ ಕಾಂಡವನ್ನು ಹೊಂದಿರುತ್ತವೆ.
# ಗಿಡಗಳು ಚದುರಿದಂತೆ ಇರುತ್ತದೆ.( ಒಂದಕ್ಕೊಂದು ಹತ್ತಿರ ಅಂಟಿಕೊಂಡು ಬೆಳೆದಿರುವುದಿಲ್ಲ)
# ಅತಿ ಬೆಲೆ ಬಾಳುವ ಮರಗಳು ಕಂಡು ಬರುತ್ತವೆ.
# ಬೇಸಿಗೆಯಲ್ಲಿ ನೀರಾವಿಯನ್ನು ತಡೆಗಟ್ಟಲು ಎಲೆಗಳನ್ನು ಉದುರಿಸಿಕೊಳ್ಳುತ್ತವೆ.
 * ಸಸ್ಯವರ್ಗ:- ಶ್ರೀಗಂಧ,ತೇಗ,ಬೀಟೆ, ಹೊನ್ನೆ,  ನಂದಿ,ನೇರಳೆ,ಇತ್ಯಾದಿ.                                                           * ಪ್ರಾಣಿ ವರ್ಗ:- ಕರಡಿ, ನರಿ, ತೋಳ, ನವಿಲು, ಇತ್ಯಾದಿ
 * ರಾಜ್ಯಗಳು:- ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಇತ್ಯಾದಿ

3. ಉಷ್ಣವಲಯದ ಹುಲ್ಲುಗಾವಲುಗಳ ಪ್ರದೇಶ:-

 ►ಉಷ್ಣಾಂಶ:-28°c
 ►ಮಳೆಯ ಪ್ರಮಾಣ:-60-100cm ಮಳೆ
ವಿಶೇಷತೆಗಳು :-
# ಅಧಿಕ ಉಷ್ಣ ಮತ್ತು ಕಡಿಮೆ ಮಳೆ ಇರುವುದರಿಂದ ಅತಿ ಹೆಚ್ಚು ಹುಲ್ಲು ಬೆಳೆಯುತ್ತದೆ.
# ಇಲ್ಲಿ ಮರಗಳ ಸಂಖ್ಯೆ ಅತಿ ಕಡಿಮೆ ಇರುತ್ತದೆ.
# ಹಚ್ಚ ಹಸಿರು ರಸಭರಿತವಾದ ಹುಲ್ಲು ಹೊಂದಿರುವ ಹುಲ್ಲುಗಾವಲುಗಳನ್ನು ಸಮಶೀತೋಷ್ಣವಲಯದ ಹುಲ್ಲುಗಾವಲು ಎನ್ನುವರು.
# ಅಧಿಕ ಪೋಷಕಾಂಶ ಹೊಂದಿರುವುದರಿಂದ ಜಾನುವಾರು ಸಾಗಾಣಿಕೆಗೆ ಸೂಕ್ತವಾಗಿರುತ್ತದೆ.
# ಒರಟಾದ ಒಣ ಹುಲ್ಲು ಹೊಂದಿರುವ ಹುಲ್ಲುಗಾವಲುಗಳನ್ನು ಉಷ್ಣವಲಯದ ಹುಲ್ಲುಗಾವಲು ಎನ್ನುವರು.
# ಒಣಹುಲ್ಲು ಇರುವುದರಿಂದ ಕಾಗದದ ಕೈಗಾರಿಕೆಗಳಲ್ಲಿ ಕಚ್ಚಾವಸ್ತು ಆಗಿ ಮತ್ತು ಪ್ಯಾಕಿಂಗ್ ಮಾಡಲು ಬಳಸುತ್ತಾರೆ.
 *ಸಸ್ಯವರ್ಗ  :- ಬಾಬುಲ್, ಬಫೆಲೋಗ್ರಾಸ್,ಲೆಮನ್ ಗ್ರಾಸ್,                                                                        * ಪ್ರಾಣಿ ವರ್ಗ:- ಹುಲಿ, ಸಿಂಹ, ಚಿರತೆ, ಕರಡಿ, ಜಿಂಕೆ,ಕಾಡೆಮ್ಮೆ, ಇತ್ಯಾದಿ 
 *ರಾಜ್ಯಗಳು:- ಗುಜರಾತ, ರಾಜಸ್ಥಾನ,ಹರಿಯಾಣ, ಪಂಜಾಬ್ ಇತ್ಯಾದಿ

 4. ಮ್ಯಾಂಗ್ರೋವ್ ಅಥವಾ ಉಬ್ಬರವಿಳೀತದ ಕಾಡುಗಳು/ ಅರಣ್ಯ[Mangroove forest]
►ಉಷ್ಣಾಂಶ :- 22°c
►ಮಳೆಯ ಪ್ರಮಾಣ :- 150-250cm.
ವಿಶೇಷತೆ :-
# ಈ ಕಾಡುಗಳು ನದಿ ಮುಖಜಭೂಮಿ ಮತ್ತು ನದಿಯ ಅಳಿವೆ  ಪ್ರದೇಶ ಅಥವಾ ಕರಾವಳಿಯ ತೀರದ ಉದ್ದಕ್ಕೂ ಬೆಳೆದಿರುತ್ತವೆ.
# ಈ ಸಸ್ಯಗಳ ಬೇರುಗಳು ನೀರಿನಲ್ಲಿ ತೇಲುತ್ತಿರುತ್ತವೆ. ಮತ್ತು ಬೆರುಗಳು  ಹೆಚ್ಚು ಆಳಕ್ಕೆ ಹೋಗದೆ ಮೇಲೆ ನಾಟಿಕೊಂಡಿರುತ್ತವೆ.                                                                                                                        * ಸಸ್ಯವರ್ಗ :- ಸುಂದರಿ ಮರಗಳು, ಗೋಲಿ ಪತ್ತಮರ ಇತ್ಯಾದಿ.
*ಪ್ರಾಣಿ ವರ್ಗ :- ಬಂಗಾಳದ ಪಟ್ಟಿ ಹುಲಿಗಳು, ಆಮೆ, ಮೊಸಳೆ, ಇತ್ಯಾದಿ
*ರಾಜ್ಯಗಳು :- ಪಶ್ಚಿಮ ಬಂಗಾಳ (ಇಲ್ಲಿ ಸುಂದರಿ ಮರಗಳು ಕಂಡುಬರುತ್ತವೆ.),ಒಡಿಸ್ಸಾ, ಕರ್ನಾಟಕ, ಆಂಧ್ರಪ್ರದೇಶ, ಇತ್ಯಾದಿ 

5. ಮರಭೂಮಿ ಅರಣ್ಯ:-                                                                                                                   ►ಉಷ್ಣಾಂಶ :- 30°c
 ►ಮಳೆಯ ಪ್ರಮಾಣ:-50 cm

ವಿಶೇಷತೆ :-
# ಗಿಡದ ಬೇರುಗಳು ತುಂಬಾ ಆಳವಾಗಿ ಬೆಳೆದಿರುತ್ತವೆ.
# ಮುಳ್ಳಿನಿಂದ ಕೂಡಿದ ಗಿಡ ಗಂಟೆಗಳು ಕುರುಚಲು ಸಸ್ಯಗಳು ಕಂಡುಬರುತ್ತವೆ.
# ಇಲ್ಲಿನ ಗಿಡದ ಎಲೆಗಳು ತುಂಬಾ ಅಗಲ, ದಪ್ಪ ಮತ್ತು ಮುಳ್ಳಿನಿಂದ ಕೂಡಿದ್ದು, ಕೆಲವು ಎಲೆಗಳು ಮೇಣದ ಹಾಗೆ ಲೇಪನ ಹೊಂದಿರುತ್ತವೆ.
 *ಸಸ್ಯವರ್ಗ:- ಪಾಪಸ್ ಕಳ್ಳಿ, ಮುಳ್ಳಿನ ಗಿಡಗಳು, ಜಾಲಿ ಮರ, ಖರ್ಜೂರ ಮರ, ಬಬೂಲ್, ಇತ್ಯಾದಿ.
 *ಪ್ರಾಣಿ ವರ್ಗ:-  ನಿರಾಚಾರಿ ಪಕ್ಷಿ, ಮತ್ತು ಪ್ರಾಣಿಗಳು, ಒಂಟೆ, ಇಲಿ ಇತ್ಯಾದಿ.
 *ರಾಜ್ಯಗಳು:-ಗುಜರಾತ,ರಾಜಸ್ಥಾನ, ಪಂಜಾಬ್,ಹರಿಯಾಣ, ಇತ್ಯಾದಿ

 6. ಪರ್ವತ ಅರಣ್ಯ/ ಅಲ್ಫೈನ್ಸ್ / ಸೂಚಿಪರ್ಣ /  ಟಂಡ್ರಾ   ಕಾಡುಗಳು.
 ►ಇಲ್ಲಿನ ಗಿಡಗಳು ಎತ್ತರಕ್ಕನುಗುಣವಾಗಿ ಬೆಳೆದಿರುತ್ತವೆ.
► ಸುಮಾರು 1500 ಮೀಟರ್ ಎತ್ತರ - ಹಿಮಾಲಯದ ಪರ್ವತದ ಕಾಡುಗಳು
#ಮರಗಳು - ತೇಗ, ಸಾಲ್, ಕರಿಮರ ಇತ್ಯಾದಿ
►ಸುಮಾರು 1500 ಮೀಟರ್ - 3650 ಮೀಟರ್ ಎತ್ತರ - ಸೂಚಿ ಪರ್ಣ  ಕಾಡುಗಳು.
 #ಮರಗಳು - ಸಿಲ್ವರ್, ಫಾರ್, ಓಕ್, ಇತ್ಯಾದಿ.
►ಸುಮಾರು 3650 ಮೀಟರ್ - 4875 ಮೀಟರ್ ಎತ್ತರ - ಅಲ್ಫೈನ್  ಹುಲ್ಲುಗಾವಲು.
#ಮರಗಳು :- ಇಲ್ಲಿ ಹೆಚ್ಚು ಹಿಮ ಸುರಿಯುವುದರಿಂದ ರೋಡ್ಹೋ, ಡೆಂಡ್ರಾನ್, ವಿಲ್ಲೋ  ಜಾತಿಯ ಮರಗಳು ಕಂಡುಬರುತ್ತವೆ.
►ಸುಮಾರು 4875 ಮೀಟರ್ ಗಿಂತಲೂ  ಎತ್ತರದಲ್ಲಿ-  ಕಲ್ಲು ಹೂ, ಪಾಚಿ ,ಕಂಡು ಬರುತ್ತವೆ.
►ಸುಮಾರು 6000 ಮೀಟರ್ ಗಿಂತಲೂ ಎತ್ತರದಲ್ಲಿ- ಸದಾ ಹಿಮದಿಂದ ಆವೃತವಾಗಿದ್ದು ಯಾವುದೇ ಮರ ಗಿಡ ಕಂಡು ಬರುವುದಿಲ್ಲ .