Ayra Notes

Subject : Geography

ಭಾರತದ ಬೆಳೆಗಳು :-

  • Jan 16,2024
Blog Image

ಭಾರತದ ಬೆಳೆಗಳು :- (ಋತುಮಾನದ ಆಧಾರಿತ ಭಾರತದ ಬೆಳೆಗಳು:)
 1.ಖಾರಿಫ್ ಬೆಳೆಗಳು:-Kharif Crops.
 ►ಈ ಬೆಳೆಗಳನ್ನು ಮುಂಗಾರು ಬೆಳೆಗಳು ಎನ್ನುವರು./ ನೈರುತ್ಯ ಮಾನ್ಸೂನ್ ನ ಬೆಳೆಗಳು/ಖಾರಿಫ್ ಬೆಳೆಗಳು ಎನ್ನುವರು.
(ಜೂನ್ ----- ಅಕ್ಟೋಬರ್ ತಿಂಗಳು)
 ►ಬಿತ್ತನೆ : ಜೂನ್ - ಜುಲೈ ತಿಂಗಳು ಕಟಾವು: ಸೆಪ್ಟೆಂಬರ್ - ಅಕ್ಟೋಬರ್ ತಿಂಗಳು.
 ►ಉದಾಹರಣೆ : ಜೋಳ, ಮೆಕ್ಕೆಜೋಳ, ಶೇಂಗಾ, ಭತ್ತ, ಸೆಣಬು, ಹತ್ತಿ, ರೇಷ್ಮೆ, ಉದ್ದು, ರಾಗಿ, ಸೂರ್ಯಕಾಂತಿ, ಸಜ್ಜೆ ಇತ್ಯಾದಿ.
2. ರಬಿ ಬೆಳೆಗಳು:- Rabi Crops
►ಈ ಬೆಳೆಗಳನ್ನು ಹಿಂಗಾರು ಬೆಳೆಗಳು ಎನ್ನುವರು. ಚಳಿಗಾಲದ ಬೆಳೆಗಳು/ ರಬಿ ಬೆಳೆಗಳು ಎನ್ನುವರು.                    (ಅಕ್ಟೋಬರ್ ತಿಂಗಳು ----- ಮಾರ್ಚ್ ತಿಂಗಳು)
►ಬಿತ್ತನೆ : ಅಕ್ಟೋಬರ್ - ನವೆಂಬರ್ ತಿಂಗಳು
►ಕಟಾವು:  ಫೆಬ್ರವರಿ - ಮಾರ್ಚ್ ತಿಂಗಳು
►ಉದಾಹರಣೆ: ಗೋಧಿ, ಬಾರ್ಲಿ, ಸಾಸಿವೆ, ಕಡಲೆ, ಕುಸುಬಿ, ಬಟಾಣಿ, ಇತ್ಯಾದಿ
3. ಬೇಸಿಗೆ ಬೆಳೆಗಳು /ಜೇಡ್ ಬೇಸಾಯ.
►ಈ ಬೆಳೆಗಳು ರಬಿ ಮತ್ತು ಖಾರಿಫ್ ಬೇಸಾಯದ ನಡುವಿನ ಅವಧಿಯಲ್ಲಿ ಬೇಸಿಗೆ ಕಾಲದ ಈ ಬೇಸಾಯವನ್ನು ಜೇಡ್ ಬೇಸಾಯ ಎನ್ನುವರು.
► ಬೇಸಿಗೆ ಕಾಲದ ಅಲ್ಪಾವಧಿಯ ಬೆಳೆಗಳು.
►ಉದಾಹರಣೆ : ಕಲ್ಲಂಗಡಿ, ಸೌತೆಕಾಯಿ, ಖರ್ಬುಜ, ತರಕಾರಿ ಮತ್ತು ಪಲ್ಲೆಗಳು ಇತ್ಯಾದಿ.