Subject : ಭೂಗೋಳ ಶಾಸ್ತ್ರ/ Geograpgy
ಕರ್ನಾಟಕದ ಮಣ್ಣುಗಳು/ Soils of Karnataka

ಮಣ್ಣು
* ಭಾರತದ ಮಣ್ಣು ಸಂಶೋಧನಾ ಕೇಂದ್ರ - ಭೂಪಾಲ್ (MP).
* ಕರ್ನಾಟಕ ಮಣ್ಣು ಅಧ್ಯಯನ ಕೇಂದ್ರ - ಬಳ್ಳಾರಿ, ಹೆಬ್ಬಾಳ.
ಶಿಲೆಗಳು ಕಣಗಳಾಗಿ ಒಡೆದು ಸಾವಿರಾರು ವರ್ಷಗಳ ನಂತರ ಭೂಮಿಯ ಮೇಲೆ ಆವರಿಸಿಕೊಳ್ಳುವ ತೇಳುವಾದ ಪದರನ್ನು ಮಣ್ಣು ಎನ್ನುವರು.
ಮಣ್ಣಿನ ಕುರಿತಾದ ಅಧ್ಯಯನವನ್ನು (ಫೆಡೋಲಜಿ) ಎನ್ನುವರು .ಕರ್ನಾಟಕದ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣು ಪ್ರಮುಕವಾಗಿದ್ದು,
ಕೆಂಪು ಮಣ್ಣು , ಕಪ್ಪು ಮಣ್ಣು ,ಮೆಕ್ಕಲು ಮಣ್ಣು, ಮತ್ತು ಜಂಬಿಟ್ಟಿಗೆ ಮಣ್ಣು ಎಂದು ನಾಲ್ಕು ಪ್ರಕಾರಗಳಾಗಿ ವಿಂಗಡಿಸಬಹುದು.
ಎ) ಕೆಂಪು ಮಣ್ಣು - Red Soil
ಈ ಮಣ್ಣು ಕೆಂಪಾಗಿರಲು ಕಾರಣ -- ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್ ಮತ್ತು ಟೆಟಾನಿಯಂ ಆಕ್ಸೈಡ್ ನೈಟ್ರೋಜನ್ ಹಾಗೂ ಸುಣ್ಣದ ಕೊರತೆಯು ಈ ಮಣ್ಣಿನಲ್ಲಿ ಕಂಡುಬರುತ್ತದೆ.
ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಈ ಮಣ್ಣು ಕಂಡು ಬರುತ್ತದೆ. ಕರ್ನಾಟಕದ ಶಿವಮೊಗ್ಗ, ಚಿಕ್ಕಮಂಗಳೂರು ,ಹಾಸನ ,ಮೈಸೂರು ,ಮತ್ತು ಕೊಡಗು ,ಜಿಲ್ಲೆಗಳಲ್ಲಿ ಬೆಂಗಳೂರು ,ಧಾರವಾಡ ,ಮಂಡ್ಯ ,ತುಮಕೂರು, ಕೆಲವು ಭಾಗಗಳಲ್ಲಿ ಈ ಮಣ್ಣು ಕಂಡುಬರುತ್ತದೆ.
ಈ ಮಣ್ಣಿನಲ್ಲಿ ರಾಗಿ, ನವಣೆ, ಶೇಂಗಾ, ಮತ್ತು ಮೆಣಸಿನ ಕಾಯಿ, ದ್ರಾಕ್ಷಿ, ಅಡುಗೆ ಈರುಳ್ಳಿ, ಮುಂತಾದ ಬೆಳೆಗಳನ್ನು ಬೆಳೆಯುವರು. ಕರ್ನಾಟಕದ ತುಮಕೂರು ಜಿಲ್ಲೆಯು ಅತಿ ಹೆಚ್ಚು ಕೆಂಪು ಮಣ್ಣನ್ನು ಹೊಂದಿದೆ .ಕರ್ನಾಟಕದಲ್ಲಿ ಅತಿ ಹೆಚ್ಚು ಹಂಚಿಕೆಯಾದ ಮಣ್ಣು ಕೆಂಪು ಮಣ್ಣಾಗಿದೆ
ಬಿ) ಕಪ್ಪು ಮಣ್ಣು - Black Soil
ಈ ಮಣ್ಣು ಅಗ್ನಿ ಶಿಲೆಗಳ ಬಸಾಲ್ಟ್ ಶಿಲೆಗಳ ತಿಥಲೀಕರಣದಿಂದ ಉತ್ಪತ್ತಿಯಾಗಿದ್ದು, ಇದನ್ನು ಕಪ್ಪು ಮಣ್ಣು, ಹತ್ತಿ ಮಣ್ಣು, ಎರೆ ಮಣ್ಣು, ರೇಗ್ಯುರ್ ಮಣ್ಣು, ಎಂದು ಕರೆಯುವರು. ಈ ಮಣ್ಣಿನಲ್ಲಿ ಜೇಡಿ ಮಣ್ಣಿನ ಕಣಗಳು ಅತಿ ಹೆಚ್ಚು ಕಂಡುಬರುತ್ತದೆ. ಈ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಕರೆಯುವರು.
ಈ ಮಣ್ಣು ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಬೀದರ್, ರಾಯಚೂರು, ಗುಲ್ಬರ್ಗ, ಯಾದಗಿರಿ, ದಾವಣಗೆರೆ, ಜಿಲ್ಲೆಗಳಲ್ಲಿ ಮತ್ತು ಚಿತ್ರದುರ್ಗ ಧಾರವಾಡ, ಬಳ್ಳಾರಿ, ಹಾವೇರಿ, ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ಈ ಮಣ್ಣಿನಲ್ಲಿ ಜೋಳ, ತೊಗರಿ, ಹತ್ತಿ, ಕಬ್ಬು ಮೆಕ್ಕೆಜೋಳ, ಗೋದಿ, ಹೊಗೆ ಸೊಪ್ಪು, ಸಜ್ಜೆ,ಈರುಳ್ಳಿ, ಅಗಸೆ, ಬಾಳೆ, ಮುಂತಾದ ಬೆಳೆ ಬೆಳೆಯುವರು.
ಸಿ) ಮೆಕ್ಕಲು ಮಣ್ಣು/ ರೆವೆ ಮಣ್ಣು (Alluvial Soil)
ಪರ್ವತಗಳಿಂದ ನದಿಗಳು ಹೊತ್ತು ತಂದು ಸಂಚಯಿಸಿರುವ ಮಣ್ಣನ್ನು ಮೆಕ್ಕಲು ಮಣ್ಣು ಎನ್ನುವರು. ಈ ಮಣ್ಣನ್ನು ಕರಾವಳಿ ಮಣ್ಣು ಅಥವಾ ಉತ್ಕೃಷ್ಟ ಮಣ್ಣು ಎಂದು ಸಹ ಕರೆಯುವರು. ಈ ಮಣ್ಣನ್ನು ಭಂಗರ್ ಮತ್ತು ಖದರ್ ಎಂದು ವಿಂಗಡಿಸಲಾಗಿದ್ದು, ಹಳೆಯ ಮಣ್ಣನ್ನು ಭಂಗಾರ್ ಎಂದು ಕರೆದರೆ, ಹೊಸದಾಗಿ ರಚನೆಯಾದ ಮಣ್ಣನ್ನು ಖದರ್ ಎಂದು ಕರೆಯುವರು. ಈ ಮಣ್ಣು ಹೆಚ್ಚು ಫಲವತ್ತಾಗಿದ್ದು, ಹೆಚ್ಚಾಗಿ ಪೊಟ್ಯಾಸಿಯಂ, ರಂಜಕ, ಸುಣ್ಣ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಂಚಿಕೆಯಾಗಿದೆ. ಈ ಮಣ್ಣಿನಲ್ಲಿ ಭತ್ತ, ತೆಂಗು, ಬಾಳೆ, ಅಡಿಕೆ, ಗೋಡಂಬಿ, ಮುಂತಾದ ಬೆಳೆಗಳನ್ನು ಬೆಳೆಯುವರು.
ಡಿ) ಜಂಬಿಟ್ಟಿಗೆ ಮಣ್ಣು (Laterite Soil)
ಹೆಚ್ಚು ಉಷ್ಣಾಂಶ ಮತ್ತು ಮಳೆ ಬೀಳುವ ಪ್ರದೇಶಗಳಲ್ಲಿ ಜಂಬು ಶಿಲೆಗಳ ಶೀಥಲೀಕರಣದಿಂದ ಈ ಮಣ್ಣು ಉಂಟಾಗುತ್ತದೆ.ಈ ಮಣ್ಣಿನಲ್ಲಿ ಕಬ್ಬಿಣ, ಸಿಲಿಕಾನ್, ಮತ್ತು ಅಲ್ಯೂಮಿನಿಯಂ ಆಕ್ಸೈಡ್ ಗಳ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಈ ಮಣ್ಣು ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ,ಕೊಡಗು, ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ಈ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು - ಕಾಫಿ, ಚಹಾ, ರಬ್ಬರ್, ಸಾಂಬಾರ್, ಪದಾರ್ಥಗಳಾದ ಯಾಲಕ್ಕಿ, ಲವಂಗ, ದಾಲ್ಚಿನ್ನಿ,ಮೆಣಸು, ಮುಂತಾದವು ಬೆಳೆಗಳನ್ನು ಬೆಳೆಯುವರು.