Subject : Geography
ಕರ್ನಾಟಕದ ನದಿಗಳು :----

ಕರ್ನಾಟಕದ ನದಿಗಳು :----
►ನದಿ-- ನದಿ ಎಂದರೆ ಉಗಮದಿಂದ ಅಂತ್ಯದವರೆಗೆ ಹರಿಯುವ ಸಿಹಿ ನೀರಿನ ಜಲಧಾರೆ.
►ನದಿ ಅಧ್ಯಯನ -- ಫೋಟೋಮಾಲಜಿ.
►ಭಾರತದಲ್ಲಿ ಸಾಕಷ್ಟು ಜಲಸಂಪತ್ತನ್ನು ಹೊಂದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ.
►ಕರ್ನಾಟಕ ರಾಜ್ಯವು ದೇಶದ ಒಟ್ಟು ಜಲಸಂಪತ್ತಿನ 6% ರಷ್ಟನ್ನು ಒಳಗೊಂಡಿದೆ.
►ಕರ್ನಾಟಕದ ನದಿಗಳು ಹರಿಯುವ ದಿಕ್ಕು, ಭೂ ಸ್ವರೂಪ, ಜಲ ವಿಭಾಗಗಳನ್ನು ಅನುಸರಿಸಿ ಕರ್ನಾಟಕದ ನದಿಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.
# ಪೂರ್ವಾಭಿಮುಖವಾಗಿ ಹರಿಯುವ ನದಿಗಳು.
# ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು.
-- ಕರ್ನಾಟಕ ರಾಜ್ಯದ ದೊಡ್ಡ ಹಾಗೂ ಪ್ರಮುಖ ನದಿಗಳು ಬಹುತೇಕ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪೂರ್ವಕ್ಕೆ ಹರಿದು ಸಾಕಷ್ಟು ದೂರ ಪ್ರವಹಿಸಿ ಬಂಗಾಳಕೊಲ್ಲಿಯನ್ನು ಸೇರುತ್ತವೆ.
-- ಕರ್ನಾಟಕ ರಾಜ್ಯದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಪಶ್ಚಿಮ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ಹರಿಯುವುದರಿಂದ ಜಲಪಾತಗಳು ನಿರ್ಮಾಣವಾಗಿ ವಿದ್ಯುತ್ ಶಕ್ತಿ
ಉತ್ಪಾದನೆಗೆ ಅನುಕೂಲವಾಗಿದೆ, ಮತ್ತು ಮುಂದೆ ಹರಿದು ಅರಬ್ಬಿ ಸಮುದ್ರ ಸೇರುತ್ತವೆ.
ಪೂರ್ವಾಭಿಮುಖವಾಗಿ ಹರಿಯುವ ನದಿಗಳು :--
* ಕಾವೇರಿ
* ಕೃಷ್ಣ
* ತುಂಗಭದ್ರಾ
►ಕಾವೇರಿ ನದಿ ಕರ್ನಾಟಕದಲ್ಲಿ ಹುಟ್ಟಿ ಉದ್ದವಾಗಿ ಹರಿಯುವ ನದಿ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚು ವಿವಾದಾತ್ಮಕವಾದ ನದಿ.
►ವಿವಾದಿತ ರಾಜ್ಯ :-
1. ಕರ್ನಾಟಕ
2. ತಮಿಳುನಾಡು
3. ಕೇರಳ
4. ಪಾಂಡಿಚರಿ
►1902 ರಲ್ಲಿ ಶಿವನಸಮುದ್ರದಲ್ಲಿ ಏಷ್ಯಾದಲ್ಲಿ ಮೊದಲು ಜಲ ವಿದ್ಯುತ್ ಉತ್ಪಾದಿಸಲಾಯಿತು.
►ಇದರ ಉದ್ದವಾದ ಉಪನದಿ :- ಹೇಮಾವತಿ, ದೊಡ್ಡ ಉಪನದಿ - ಕಬಿನಿ, ಕಾವೇರಿ ನದಿ ದಕ್ಷಿಣದ ಗಂಗೆ ಎನ್ನುವರು.
►ಉಗಮ = ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ.
►ಉದ್ದ = 765 km. (KA = 400km)
►ಕಾವೇರಿ ನದಿಯ ಉಪನದಿಗಳು :--
ಎ) ಹೇಮಾವತಿ
ಬಿ) ಕಪಿಲ
ಸಿ) ನುಶಿ
ಡಿ) ಶಿಂಷಾ
ಈ) ಮೊಯಾರ್
ಎಫ್) ಲಕ್ಷ್ಮಣ ತೀರ್ಥ
ಜಿ) ಅರ್ಕಾವತಿ
ಹೆಚ್) ಸುವರ್ಣವತಿ
ಐ) ಭವಾನಿ
ಜೆ) ಲೋಕಪಾವನಿ
2. ಕೃಷ್ಣಾ ನದಿ ---
►ಉಗಮ = ಮಹಾರಾಷ್ಟ್ರದ ಮಹಾಬಲೇಶ್ವರ (ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ್ ರಾಜ್ಯಗಳ ಮೂಲಕ ಹರಿಯುತ್ತದೆ)
►ಉದ್ದ = 1400km (KA = 360 km)
►ಕರ್ನಾಟಕದಲ್ಲಿ ಹೆಚ್ಚು ನೀರಾವರಿ ಒದಗಿಸುವ ನದಿಯಾಗಿದೆ.
►ಕೃಷ್ಣಾ ನದಿಯ ಉಪನದಿಗಳು :--
ಎ).ತುಂಗಭದ್ರಾ
ಬಿ).ಮಲಪ್ರಭಾ
ಸಿ).ಘಟಪ್ರಭಾ
ಡಿ).ಭೀಮ
ಈ).ಡೋಣಿ
ಎಫ್).ದೂದ್ ಗಂಗಾ
ಜಿ).ಕೊಯ್ನಾ
ಹೆಚ್).ಪಂಚಗಂಗಾ
ಐ).ಪಾಲೇರು ಇತ್ಯಾದಿ.
►ತುಂಗಭದ್ರಾ ನದಿಯನ್ನು ಕೃಷ್ಣಾ ನದಿಯ ಸಹೋದರಿ ಎಂದು ಕರೆಯುವರು.
3. ತುಂಗಭದ್ರಾ ನದಿ :--
►ಕೃಷ್ಣಾ ನದಿಯ ಉಪನದಿಗಳಲ್ಲಿ ಪ್ರಮುಖ ಉಪನದಿ.
►ಉಗಮ -- ಚಿಕ್ಕಮಂಗಳೂರು ಜಿಲ್ಲೆಯ ವರಾಹಿ ಬೆಟ್ಟದ ಗಂಗಾಮೂಲ
►ತುಂಗಾ ನದಿ ಮತ್ತು ಭದ್ರಾ ನದಿ ಸಂಗಮ - ಶಿವಮೊಗ್ಗ ಜಿಲ್ಲೆಯ ಕೊಡಲಿ.
►ಉದ್ದ = 683 km (KA = 381 km)
►ತುಂಗಭದ್ರಾ ನದಿಯ ಉಪನದಿಗಳು :-
ಎ).ವರದಾ,
ಬಿ).ಹಗರಿ
ಸಿ).ವೇದಾವತಿ ಇತ್ಯಾದಿ
►ಕೃಷ್ಣ ಮತ್ತು ತುಂಗಭದ್ರಾ ನದಿಯ ಮಧ್ಯದ ಭೂಪ್ರದೇಶವನ್ನು "ರಾಯಚೂರು ದೋ - ಅಬ್ಬ" ಪ್ರದೇಶ ಎನ್ನುವರು. ಈ ನದಿಯು ಸಿಹಿ
ನೀರಿಗೆ ಪ್ರಸಿದ್ಧಿಯಾಗಿರುವುದರಿಂದ "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆ ಇದೆ.
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು :--
1.ಶರಾವತಿ
►ಉಗಮ = ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅಂಶಿತೀರ್ಥ.
►ಉದ್ದ = 132 km,
►253 m ಎತ್ತರದಿಂದ ಧುಮಕುವ ಜೋಗ ಜಲಪಾತವನ್ನು ಹೊಂದಿದ್ದು, ಸಾಗರದ ಬಳಿ ಲಿಂಗನಮಕ್ಕಿ ಆಣೆಕಟ್ಟನ್ನು ಶರಾವತಿ ನದಿಗೆ ಕಟ್ಟಲಾಗಿದೆ.
►ಇದರ ಉಪನದಿಗಳು : - ಹರಿದ್ರಾವತಿ ಮತ್ತು ಎಣ್ಣೆ ಹೊಳೆ.
2. ಕಾಳಿ -
►ಉಗಮ - ಉತ್ತರ ಕನ್ನಡ ಜಿಲ್ಲೆಯ ದಿಗ್ಗಿ ಘಾಟ್
►ಉದ್ದ 184 km, ವಾಲ್ ಗುಳಿ ಮತ್ತು ಸಾ ತೇಡಿ ಎಂಬ ಜಲಪಾತ ಹೊಂದಿದ್ದು, ಈ ನದಿ ಎಡ ಭಾಗದಲ್ಲಿ ಕೈಗಾ ವಿದ್ಯುತ್ ಸ್ಥಾವರವನ್ನು ಕಾಣಬಹುದು.
►ಸೂಫಾ ಎಂಬಲ್ಲಿ ಈ ನದಿಗೆ ಅಣೆಕಟ್ಟನ ನಿರ್ಮಿಸಲಾಗಿದೆ.
3. ನೇತ್ರಾವತಿ :-
►ಉಗಮ ಚಿಕ್ಕಮಂಗಳೂರು ಜಿಲ್ಲೆಯ ಬಲ್ಲಾಳ ರಾಯನದುರ್ಗ.
►ಉದ್ದ = 161 km.
►ಇದರ ಉಪನದಿಗಳು :-
ಕುಮಾರಧಾರ,ಸೀಸಲಾ ಮತ್ತು ಗುರುಮಿರ ಇತ್ಯಾದಿ.
►ಬಂಡಾಜೆ ಎಂಬಲ್ಲಿ ಈ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
4. ಮಹಾದಾಯಿ ನದಿ:-
►ಉಗಮ - ಬೆಳಗಾವಿ ಜಿಲ್ಲೆಯ ಭೀಮಗಡ
►ಉದ್ದ = 81 km
►ಕರ್ನಾಟಕದಲ್ಲಿ 35 km ಉದ್ದ ಹರಿಯುವ ಈ ನದಿಯು ಕಳಸ ಬಂಡೂರಿ ಎಂಬ ಉಪನದಿಗಳನ್ನು ಹೊಂದಿದ್ದು, ದೂದ್ ಸಾಗರ
ಮತ್ತು ವಜ್ರ ಪೋಹ ಎಂಬ 2 ಜಲಪಾತಗಳನ್ನು ಹೊಂದಿದೆ. ಕಳಸ ಬಂಡೂರಿ ಯೋಜನೆಯು ಈ ನದಿಗೆ ಸಂಬಂಧಿಸಿದೆ.
⇒ಇತರೆ ನದಿಗಳು :=
a).ಅಘನಾಶಿನಿ
b).ವರಾಹಿ
c).ಬೇಡ್ತಿ.