Ayra Notes

Subject : Science

ಕ್ಷಿಪಣಿಗಳು  (Missiles)

  • Jan 11,2024
Blog Image

ಕ್ಷಿಪಣಿಗಳು  (Missiles)

 ರಾಕೆಟ್ ಚಾಲಿತದೊಂದಿಗೆ ಹೆಚ್ಚಿನ ವೇಗದಲ್ಲಿ, ಹೆಚ್ಚಿನ ನಿಖರತೆಯೊಂದಿಗೆ ಸ್ಪೋಟಕ ಸಿಡಿತಲೆಗಳನ್ನು ತಲುಪಿಸುವ ವಿನ್ಯಾಸವೇ ಕ್ಷಿಪಣಿ.

 *  ಕ್ಷಿಪಣಿಯಲ್ಲಿ ಮುಖ್ಯವಾಗಿ ಎರಡು ವಿಧಗಳು :--

1. ಬ್ಯಾಲೆಸ್ಟಿಕ್ ಕ್ಷಿಪಣಿ

* ಅತಿಯಾದ ದೂರವನ್ನು ಕ್ರಮಿಸುತ್ತದೆ.

* ಕಡಿಮೆ ವೇಗ ಹೊಂದಿದೆ.

* ಅಂತಿಮವಾಗಿ ಗುರುತ್ವಾಕರ್ಷಣಾ ಬಲಕ್ಕೆ ಒಳಪಡುತ್ತದೆ.

* ಕ್ಷಿಪಣಿಯ ದಿಕ್ಕನ್ನು ಬದಲಾಯಿಸಲಾಗುವುದಿಲ್ಲ.

ಉದಾಹರಣೆ  :- ಅಗ್ನಿ, ಪೃಥ್ವಿ.            

 2. ಕ್ರೂಸ್  ಕ್ಷಿಪಣಿ

* ಕಡಿಮೆ ದೂರವನ್ನು ಕ್ರಮಿಸುತ್ತದೆ.

* ಹೆಚ್ಚು ವೇಗ ಹೊಂದಿದೆ.

* ಅಂತಿಮವಾಗಿ ಗುರುತ್ವಾಕರ್ಷಣ ಬಲಕ್ಕೆ ಒಳಪಡುವುದಿಲ್ಲ.

* ಕ್ಷಿಪಣಿಯ  ದಿಕ್ಕನ್ನು ಬದಲಾಯಿಸಬಹುದು.

ಉದಾಹರಣೆ :- ಬ್ರಹ್ಮೋಸ್, ಶೌರ್ಯ, ನಿರ್ಭಯ

ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ:--

1983 ರಲ್ಲಿ - ಡಾ. A.P.G ಅಬ್ದುಲ್ ಕಲಾಂ ರವರ ನೇತೃತ್ವದಲ್ಲಿ ಸಮಗ್ರ ಗುರಿ ನಿರ್ದೇಶಕ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮದ ಅಡಿಯಲ್ಲಿ ಅಗ್ನಿ, ಪೃಥ್ವಿ, ಆಕಾಶ, ತ್ರಿಶೂಲ,  ನಾಗ್ ಹೆಸರಿನ ಕ್ಷಿಪಣಿಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ.

 1. ಅಗ್ನಿ ಕ್ಷಿಪಣಿಗಳು :--

ಇದು ನೆಲದಿಂದ - ನೆಲಕ್ಕೆ ಉಡಾಯಿಸುವ - ಮಧ್ಯಾಂತರ ವ್ಯಾಪ್ತಿಯ ಬ್ಯಾಲಾಸ್ಟಿಕ್  ಕ್ಷಿಪಣಿಯಾಗಿದೆ.

1989 ರಲ್ಲಿ ಚಾಂಡಿಪುರದಲ್ಲಿ ಪರೀಕ್ಷಾರ್ಥವಾಗಿ ಪ್ರಯೋಗಿಸಲಾಯಿತು.

ಅಗ್ನಿಯ ಐದು ಮುಖ್ಯ ಆವೃತ್ತಿಗಳು:--

ಅಗ್ನಿ1,  ಅಗ್ನಿ 2, ಅಗ್ನಿ 3, ಅಗ್ನಿ 4, ಅಗ್ನಿ 5.

2. ಪೃಥ್ವಿ ಕ್ಷಿಪಣಿಗಳು :--

 ಇದು ಭೂಮಿಯಿಂದ - ಭೂಮಿಗೆ ಹಾರುವ ಅಲ್ಪ ವ್ಯಾಪ್ತಿಯ ಕ್ಷಿಪಣಿ. ಬ್ಯಾಲಾಸ್ಟಿಕ್ ಕ್ಷಿಪಣಿಯಾಗಿದೆ. (ಪ್ರಥಮ ದೇಶಿಯವಾಗಿ ಅಭಿವೃದ್ಧಿಪಡಿಸಿದೆ)

 ಪೃಥ್ವಿಯ ಆವೃತ್ತಿಗಳು :--

 ಪೃಥ್ವಿ 1, ಪೃಥ್ವಿ 2, ಪೃಥ್ವಿ 3.

3. ನಾಗ ಕ್ಷಿಪಣಿ :- Fire & Forget ಮಾದರಿಯ ಕ್ಷಿಪಣಿ

ಟ್ಯಾಂಕರ್ ವಿರುದ್ಧ ನಿರ್ದೇಶಿತ ಕ್ಷಿಪಣಿ (ಆ್ಯಂಟಿಟ್ಯಾಂಕ್ ಕ್ಷಿಪಣಿ)

 ಇದನ್ನು ಯಾವುದೇ ಪರಿಸ್ಥಿತಿಯ ಹವಾಮಾನದಲ್ಲೂ ಬಳಸಬಹುದು.

 ವ್ಯಾಪ್ತಿ  -- 3 ರಿಂದ 7 km

4. ಆಕಾಶ್ ಕ್ಷಿಪಣಿ :-

ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.

ವ್ಯಾಪ್ತಿ -  25 km

5.  ತ್ರಿಶೂಲ್ ಕ್ಷಿಪಣಿ:- 

ಕೆಳಹಂತದ ಅಕ್ರಮಣವನ್ನು ಎದುರಿಸಲು ಬಳಸಲಾಗುತ್ತದೆ. ಮತ್ತು ಸಮುದ್ರದ ಮೇಲೂ ಬಳಸಬಹುದು ಮತ್ತು ಚಲಿಸುವ ವಾಹನಗಳಲ್ಲಿಯೂ ಪ್ರಯೋಗಿಸಲಾಗಿದೆ.

ಬ್ರಹ್ಮೋಸ್   ಕ್ಷಿಪಣಿ :-

DRDO & ರಷ್ಯಾದ  NPO ಸಂಸ್ಥೆಗಳ ಜಂಟಿ ಯೋಜನೆಯಾಗಿದೆ. ಕ್ರೂಸ್ ಸೂಪರ್ ಸಾನಿಕ್ ಕ್ಷಿಪಣಿಯಾಗಿದ್ದು, ಧ್ವನಿಗಿಂತ ವೇಗವಾಗಿ ಚಲಿಸುತ್ತದೆ.

 ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕೋವ ನದಿಗಳ ಹೆಸರು ಜೋಡಿಸಿ "ಬ್ರಹ್ಮೋಸ್ ಕ್ಷಿಪಣಿ" ಎಂದು ಹೆಸರಿಸಲಾಗಿದೆ.

ವಿಶೇಷತೆ - ಶತ್ರುಗಳಿಂದ/ ನೆಲೆಯಿಂದ ಬರುವ ಕ್ಷಿಪಣಿಯ ಹಾದಿ ತಪ್ಪಿಸುವ ವ್ಯವಸ್ಥೆ ಹೊಂದಿದೆ.

 ಭಾರತದಲ್ಲಿ ಸುಮಾರು 29 ಕ್ಷಿಪಣಿಗಳಿವೆ.

 ನಿರ್ಭಯ್ :-   ದೀರ್ಘ ವ್ಯಾಪ್ತಿಯ ಸಬ್ ಸಾನಿಕ್ ಕ್ರೂಸ್  ಕ್ಷಿಪಣಿ ಯಾಗಿದ್ದು ಇನ್ನೂ ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿದೆ.

 ಅಸ್ತ್ರ-  5 ನೇ ತಲೆಮಾರಿನ ಕ್ಷಿಪಣಿ+  ಗಾಳಿಯಿಂದ- ಗಾಳಿಗೆ ಹಾರುವ ಕ್ಷಿಪಣಿಯಾಗಿದೆ.

 ನೋವೇಟರ್ - ks-172- ಗಾಳಿಯಿಂದ -ಗಾಳಿಗೆ ಹಾರುವ ಕ್ಷಿಪಣಿ.

MICA ಕ್ಷಿಪಣಿ+  ಗಾಳಿಯಿಂದ -  ಗಾಳಿಗೆ ಹರವ ಕ್ಷಿಪಣಿ.

ಸ್ಮಾರ್ಟ್ :- ಜಲಾಂತರ್ಗಾಮಿ ವಿರೋಧಿ ಕ್ಷಿಪಣಿ

* ಭಾರತದ ಕ್ಷಿಪಣಿ ಮಾನವ (Missile Man of India) ಎಂದು ಯಾರನ್ನು ಕರೆಯುತ್ತಾರೆ?

" ಡಾ. ಎ. ಪಿ. ಜೆ. ಅಬ್ದುಲ್ ಕಲಾಂ"

* ಭಾರತದ ಕ್ಷಿಪಣಿ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ ?

 ಟೆಸ್ಸಿ ಥಾಮಸ್  :- DRDO ನಲ್ಲಿ ಅಗ್ನಿ - 4 ಕ್ಷಿಪಣಿಯ ಮಾಜಿ ಯೋಜನಾ ನಿರ್ದೇಶಕರು, ಭಾರತೀಯ ವಿಜ್ಞಾನಿ, ಮತ್ತು ಏರೋನಾಟಿಕ್ ಸಿಸ್ಟಮ್ಸ್ ನ ಮಹಾ ನಿರ್ದೇಶಕರು.

 ಪೃಥ್ವಿ ಕ್ಷಿಪಣಿ ಭಾರತದ ಮೊದಲ ಕ್ಷಿಪಣಿಯಾಗಿದೆ.