Micro Biology
  • Jan 17,2024
Blog Image

ಸೂಕ್ಷ್ಮಾಣು ಜೀವಿಗಳು ಮತ್ತು ರೋಗಗಳು :--
ಸೂಕ್ಷ್ಮಜೀವಿಗಳು, ಸೂಕ್ಷ್ಮ ಏಕಕೋಶೀಯ ಜೀವಿಗಳು ಬರಿಗಣ್ಣಿನಿಂದ ನೋಡಲಾಗುವುದಿಲ್ಲ, ಕೆಲವು ಸೂಕ್ಷ್ಮಜೀವಿಗಳು ನಮ್ಮ ದಿನನಿತ್ಯದ ಜೀವನದಲ್ಲಿ ಉಪಯುಕ್ತವಾಗುತ್ತಿದ್ದರೆ ಇತರವು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ರೋಗಕಾರಕಗಳು ಎಂದು ಕರೆಯಲಾಗುತ್ತದೆ.
# ಸೂಕ್ಷ್ಮಾಣು ಜೀವಿಗಳ ಕುರಿತು ಅಧ್ಯಯನ ಮಾಡುವುದಕ್ಕೆ "ಮೈಕ್ರೋ ಬಯಾಲಜಿ" ಎಂದು ಕರೆಯುತ್ತಾರೆ.ಮತ್ತು ಅಧ್ಯಯನ ಮಾಡಲು ಸೂಕ್ಷ್ಮದರ್ಶಕವನ್ನು ಬಳಸುತ್ತಾರೆ.
# ಸೂಕ್ಷ್ಮಾಣು ಜೀವಿಗಳನ್ನು ಉಂಟುಮಾಡುವ ರೋಗಗಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಗಳು, ಪ್ರೋಟೋಜೋವಾ, ಶಿಲೀಂಧ್ರಗಳು, ಸೇರಿವೆ.
# ಸೂಕ್ಷ್ಮಾಣು ಜೀವಿಗಳಿಂದ ಹಲವಾರು ರೋಗಗಳು ಉಂಟಾಗುತ್ತವೆ.


 ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ರೋಗಗಳು:--

1.ವೈರಸ್ :-
# ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಮಾತ್ರ ವೈರಸ್ ಗಳನ್ನು ನೋಡಬಹುದು.
# ವೈರಸ್ ಗಳು DNA or RNA ಎಂತಹ ಜೆನೆಟಿಕ್ ಕೋಡ್ ಗಳನ್ನು ಹೊಂದಿರುವ ಸೂಕ್ಷ್ಮ ರೋಗ ಕಾರಕಗಳು.
# ಅತಿಥೇಯ ದೇಹದಲ್ಲಿ ಮಾತ್ರ ಅವು ಸಕ್ರಿಯವಾಗುತ್ತವೆ ಮತ್ತು ಒಂದು ವೈರಸ್ ಗುಣಿಸಿ /ವಿಭಜನೆ ಹೊಂದಿ ಲಕ್ಷಾಂತರ ವೈರಸ್ ಗಳನ್ನು ಉತ್ಪಾದಿಸಿ ರೋಗವನ್ನುಂಟು ಮಾಡುತ್ತವೆ.
# ಹರಡುವಿಕೆ:- ವೈರಸ್ ಗಳು ನಾವು ಉಸಿರಾಡುವ ಗಾಳಿಯ ಮೂಲಕ ಉಸಿರಾಟದ ಹನಿಗಳ ಮೂಲಕ,ಅಥವಾ ಸೋಂಕಿತ ವ್ಯಕ್ತಿಯ ರಕ್ತದ ಮೂಲಕ ಅಥವಾ ದೈಹಿಕ ದ್ರವಗಳ ಸಂಪರ್ಕದ ಮೂಲಕ ಹರಡಬಹುದು.

ವೈರಸ್ ನಿಂದ ಹರಡುವ ರೋಗಗಳು :-
1.ಡೆಂಗ್ಯೂ ಜ್ವರ:-(Dengue or Break bone fever)
 * ಈ ರೋಗವು  ಪ್ಲಾವಿ ವೈರಸ್ ಇಂದ ಬರುವ ರೋಗವಾಗಿದೆ.
*  ಈ ರೋಗವು "ಈಡಿಸ್  ಈಜಿಪ್ಟ್" ಜಾತಿಯ ಸೊಳ್ಳೆಯ ಮೂಲಕ ಹರಡುತ್ತದೆ. ಇದನ್ನು ಮೂಳೆಮುರಿತ ಜ್ವರ ಎಂತಲೂ ಕರೆಯುವರು.
*  ಪ್ರತಿ ವರ್ಷ ಜೂನ್ 15 ಅಂತರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.
2. ಏಡ್ಸ್  (AIDS - Acquired Immune de - ficiency Syndrome):- HIV - Human Immuno Virus
 ಹ್ಯೂಮನ್ ಇಮ್ಯೂನೊ ವೈರಸ್ ನಿಂದ ಉಂಟಾಗುವ ರೋಗ.
* ಈ ರೋಗವು ರಿಟ್ರೋ ವೈರಸ್ ನಿಂದ ಬರುವ ರೋಗವಾಗಿದೆ.
* HIV 1 & HIV 2 ವೈರಸ್ ಗಳು ಬಹು ಮುಖ್ಯ ಕಾರಣವಾಗಿವೆ.

ಏಡ್ಸ್ ರೋಗವನ್ನು ಪತ್ತೆ ಹಚ್ಚುವ ಪರೀಕ್ಷೆಗಳು :-
1. ಎಲಿಸಾ (Elisa) - Enzyme Linked Immuno Sarbent Assay)
2. P C R - ಪಾಲಿಮರೈಸ್ ಚೈನ್ ರಿಯಾಕ್ಷನ್
3. ವೆಸ್ಟ್ರನ್ ಬಾಲ್ಟ್
# ನ್ಯಾಷನಲ್ ಏಡ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್   ಪೂಣೆ ಯಲ್ಲಿದೆ.
# NACO - National Aids Controle Organization
 ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ದೆಹಲಿಯಲ್ಲಿದೆ.
-- ಈ ಕಾಯಿಲೆ ಹರಡುವಿಕೆ --
1. ಸೋಂಕಿತ ವ್ಯಕ್ತಿಯ ಲೈಂಗಿಕ ಸಂಪರ್ಕ
2. ಸೋಂಕಿತ ವ್ಯಕ್ತಿಯ ಸೂಜಿ ಅಥವಾ ಸಿರೇಂಜ್ ಗಳನ್ನು ಹಂಚಿಕೊಳ್ಳೋದು.
3. ತಾಯಿಯ ಎದೆ ಹಾಲಿನಿಂದ ಮಗುವಿಗೆ.
4. ಸೋಂಕಿತ ವ್ಯಕ್ತಿಯ ರಕ್ತದಾನ.

3. ರೇಬಿಸ್ - (Rabies)
* ಹುಚ್ಚುನಾಯಿ ಕಡಿತದಿಂದ ಬರುವ ರೋಗವಾಗಿದೆ.
* ಇದು ರೇಬಿಸ್ ವೈರಸ್ ನಿಂದ ಬರುವ ರೋಗವಾಗಿದೆ.
* ರೇಬಿಸ್ ರೋಗಕ್ಕೆ ಚುಚ್ಚುಮದ್ದು ಕಂಡು ಹಿಡಿದವರು - ಲೂಯಿ  ಪ್ಯಾಶ್ಚರ್ ರವರು
* ಸೆಪ್ಟಂಬರ್ - 28ನ್ನು ವಿಶ್ವರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.
* ಇದನ್ನು ಆ್ಯಂಟಿ ರೇಬಿಸ್ ಲಸಿಕೆಗಳಾದ, ವಿ ಆರ್ ಜಿ ಚುಚ್ಚುಮದ್ದನ್ನು ಬಳಸಿ ನಿಯಂತ್ರಿಸಬಹುದು.

4. ಪೋಲಿಯೋ (ಪೋಲಿಯೋ ಮೈಲೈಟಿಸ್) 
* ಇದು ಪೋಲಿಯೋ ವೈರಸ್ ನಿಂದ ಉಂಟಾಗುತ್ತದೆ.
* ಇದು 6 ತಿಂಗಳಿನಿಂದ - 15 ವರ್ಷವರೆಗಿನ ವಯಸ್ಸಿನಲ್ಲಿ ಕಂಡು ಬರುತ್ತದೆ. ಮತ್ತು ಮೆದುಳು ಬಳ್ಳಿಯ ಮೇಲೆ ಸೊಂಕು ಉಂಟುಮಾಡುತ್ತದೆ.
* ಈ ರೋಗವನ್ನು ಟಿ.ಎ.ಬಿ ಲಸಿಕೆಗಳಿಂದ ಸರಿಪಡಿಸಬಹುದು.

* ಪ್ರತಿ ವರ್ಷ ಅಕ್ಟೋಬರ್ 24ನ್ನು ವಿಶ್ವ ಪೋಲಿಯ ದಿನವನ್ನಾಗಿ ಆಚರಿಸುತ್ತಾರೆ.
* ಬಾಯಿ ಮೂಲಕ ಹಾಕುವ ಪೋಲಿಯೋ ಹನಿಗಳನ್ನು ಆಲ್ಬರ್ಟ್ ಸಾಬೀನ್ ಎಂಬ ವಿಜ್ಞಾನಿ ಅಭಿವೃದ್ಧಿ ಪಡಿಸಿದರು.
5. ಮಂಗನ ಬಾವು(Momps) ಮಂಪ್ಸ್
 * ಮಂಪ್ಸ್  ವೈರಸ್ ನಿಂದ ಬರುವ ರೋಗವಾಗಿದ್ದು, ರೋಗಗಳ ಜೊಲ್ಲು ರಸದಿಂದ ಗಾಳಿಯ ಮೂಲಕ ಹರಡುತ್ತದೆ. ಇದು ಲಾಲಾರಸ ಗ್ರಂಥಿಗಳಿಗೆ ಸೋಂಕನ್ನುಂಟು ಮಾಡುತ್ತದೆ. ಮತ್ತು ಈ ಕಾಯಿಲೆಯನ್ನು ಗದ್ದಬಾವು ಎನ್ನುವರು.

6. ನಿಫಾ ವೈರಸ್ :-
* ಬಾವಲಿ ಹಂದಿ ಇತರ ಪ್ರಾಣಿಗಳ ಮೂಲಕ ಹರಡುವುದು.
*  1998 ರಲ್ಲಿ ಮೊದಲ ಬಾರಿಗೆ ಮಲೇಷಿಯಾದಲ್ಲಿ ಸೋಂಕು ಪತ್ತೆಯಾಯ್ತು. ಇತ್ತೀಚಿಗೆ ಕೇರಳದ ಕೊಯಿಕ್ಕೊಡ್   ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
* ಇದು ಪ್ರಾಣಿಗಳಿಂದ - ಮನುಷ್ಯರಿಗೆ ಬರುತ್ತದೆ.
7. ಕೋವಿಡ್ - 19 (COVID-19)

ಈ ಕಾಯಿಲೆ - 2019 ರಲ್ಲಿ ಪತ್ತೆ ಹೆಚ್ಚಲಾಯಿತು ಮತ್ತು ಪ್ರಪಂಚದಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್  ನಗರದಲ್ಲಿ ಪತ್ತೆ ಹಚ್ಚಲಾಯಿತು.
* ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಹಚ್ಚಲಾಯಿತು.
* ಈ ರೋಗವು SARS - COV - 2 ಕೊರೊನ ವೈರಸ್ ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ.
#  ಕೊರೊನಾದ ಪರೀಕ್ಷೆಗಳು :-
1. RTPC R
Reverse transcription polymeraze chain reaction
2.CTSCAN - Computerised Tomography
3.RAT - Rapid Antigen Test.

8.   ಹಕ್ಕಿಜ್ವರ - H5N1 ವೈರಸ್ ನಿಂದ ಹರಡುತ್ತದೆ.
9. ಕಾಲುಬಾಯಿ ರೋಗ  :- Foot and Mouth disease
* ಇದು ಕಾಕ್ಸಾಕಿ - ಎ ವೈರಸ್ ಗಳಿಂದ ದನಗಳಿಗೆ ಉಂಟಾಗುತ್ತದೆ.
10. ಹಂದಿ ಜ್ವರ - H1N1 ವೈರಸ್ ಮತ್ತು ಸ್ಪೀನ್ ಇನ್ ಫ್ಲೂಯಂಜಾ   ವೈರಸ್ ಗಳಿಂದ  ಹರಡುತ್ತದೆ.

11. ಚಿಕನ್ ಗುನ್ಯಾ :- ಆಲ್ಫ್ ವೈರಸ್ ಗಳಿಂದ ಉಂಟಾಗುತ್ತದೆ.
 ಏಡಿಸ್ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುತ್ತದೆ. ರೋಗದ ನಿವಾರಣೆಗೆ ಕ್ಲೋರೋಕ್ವಿನೈನ್   ಬಳಸುತ್ತಾರೆ.
12. ನೆಗಡಿ - ರಿನೋ ವೈರಸ್‌ ನಿಂದ ಬರುತ್ತದೆ.
13. ಮೆದುಳು ಜ್ವರ - ಆರ್ಬೋ ವೈರಸ್ ಗಳಿಂದ ಉಂಟಾಗುತ್ತದೆ. ಜಪಾನಿಸ್ ಬಿ ಎನ್ ಸೆಫ್ಲೈಟಿಸ್ ವೈರಸ್ ದಿಂದ ಬರುತ್ತದೆ.
ಇದು ಕ್ಯೂಲೆಕ್ಷ್ ಸೊಳ್ಳೆಗಳ ಮೂಲಕ ಹರಡುತ್ತದೆ.
14. ಎಬೋಲಾ ವೈರಸ್ ಎಬೋಲಾ ವೈರಸ್ ನಿಂದ ಉಂಟಾಗುತ್ತದೆ.
15. ಹೆಪಟೈಟಿಸ್ - ಬಿ
ಹೆಪಟೈಟಿಸ್ - ಬಿ ವೈರಸ್ ನಿಂದ ಉಂಟಾಗುತ್ತಿದ್ದು ಕಲುಪಿತ ನೀರು ಮತ್ತು ಆಹಾರದ ಮೂಲಕ ಬರುವ ರೋಗವಾಗಿದೆ.
ಮೆ- 19ನ್ನು ವಿಶ್ವ ಹೆಪಟೈಟಿಸ್ ದಿನ ಎ೦ದು ಆಚರಿಸಲಾಗುತ್ತದೆ.


ಬ್ಯಾಕ್ಟೀರಿಯಾದಿಂದ ಹರಡುವ ರೋಗಗಳು:-
1. ಕಾಲರಾ - ಇದು ವಿಬ್ರಿಯೊ ಕಾಲರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ರೋಗವಾಗಿದ್ದು, ನೊಣಗಳಿಂದ ಹರಡುತ್ತದೆ.
2. ಅಂತ್ರಾಕ್ಷ್ ( ಅಂತ್ರಾಕ್ಸ್) ನರಡಿ ಜ್ವರ -
" ಬೆಸಿಲಸ್ ಅಂತ್ರಾ ಸಿಸ್ " ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.
3. ಕ್ಷಯ ರೋಗ - Tuberculosis
ಮೈಕೋಬ್ಯಾಕ್ಟಿರಿಯಂ ಟ್ಯುಬರ್ ಕ್ಯೂಲಾಸೀಸ್ ಎಂಬ ಬ್ಯಾಕ್ಟೀರಿಯಾ ದಿಂದ ಬರುವ ರೋಗವಾಗಿದೆ.
ಈ ರೋಗಕ್ಕೆ BCG ಚುಚ್ಚುಮದ್ದನ್ನು ಬಳಸಲಾಗುತ್ತದೆ.
4. ಕುಷ್ಠ ರೋಗ:- ಮೈಕೋ ಬ್ಯಾಕ್ಟಿರಿಯಂ ಲೆಪ್ರೆ ಮತ್ತು ಮೈಕೋ ಬ್ಯಾಕ್ಟಿರಿಯಂ  ಮೆಟಾಸಿಸ್ ಎಂಬ   ಬ್ಯಾಕ್ಟೀರಿಯಾ ಗಳಿಂದ ಬರುತ್ತದೆ.
5. ಪ್ಲೇಗ್ :- ಎರಿಟಿನಾ  ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ.
ರೋಗ, # ಇಲ್ಲಿಗಳಿಂದ ಹರಡುವ ರೋಗವಾಗಿದೆ.
# ಸ್ಟೆಪ್ಟೊಮೈಸಿನ್, ಟೆಟ್ರಾ ಸೈಕ್ಲಿನ್ ಎಂಬ ಔಷಧಗಳನ್ನು ಬಳಸಲಾಗುತ್ತದೆ.
6. ಟೈಫಾಯಿಡ್ ( ವಿಷಮ ಶೀತ ಜ್ವರ)
#'ಸಾಲ್ಮೋನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾ ದಿಂದ ಉಂಟಾಗುತ್ತದೆ.
7. ಧನುರ್ವಾಯು (ಟೆಟಾನಸ್)
ಕ್ಲೊಸ್ಟ್ರಿಡಿಯಂ ಟೆಟಾನಿ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ. ಮಕ್ಕಳಿಗೆ 3 ಬಾರಿ ಡಿ.ಟಿ. ಪಿ ಲಸಿಕೆಯನ್ನು ಕೊಡಬೇಕು.

DPT   = ಡಿಪ್ತಿರಿಯಾ, ಪರ್ ಟೂಸಿಸ್, ಟೆಟಾನಸ್, ಚುಚ್ಚುಮದ್ದು ಹಾಕಿಸಲಾಗುತ್ತದೆ.
8. ಡಿಫ್ತಿ ರಿಯಾ :-
 ಚಿಕ್ಕ ಮಕ್ಕಳಲ್ಲಿ ಕಾರ್ನಿ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ.
9. ನ್ಯೂಮೋನಿಯಾ:-
ಡಿಪ್ಲೋಕಾಕಸ್ ನ್ಯೂಮೋನಿಯಾ ಬ್ಯಾಕ್ಟೀರಿಯಾ ದಿಂದ ಉಂಟಾಗುತ್ತದೆ.

ಪ್ರೋಟೋಜೋವಾ ಆದಿ ಜೀವಿಗಳಿಂದ ಹರಡುವ ರೋಗಗಳು :-
1. ಮಲೇರಿಯಾ :- "ಪ್ಲಾಸ್ಮೊಡಿಯಂ" ಎಂಬ ಆದಿ ಜೀವಿಗಳಿಂದ ಉಂಟಾಗುತ್ತದೆ.
 * ಈ ರೋಗವು ಅನಾಫೀಲಿಸ್  ಹೆಣ್ಣು ಸೊಳ್ಳೆಯ ಮೂಲಕ ಹರಡುತ್ತದೆ.
* ಈ ರೋಗದ ನಿವಾರಣೆಗೆ
ಕ್ವೀನೈನ್ ಎಂಬ ಔಷಧಿಯನ್ನು ಬಳಸಲಾಗುತ್ತದೆ.
# ಪ್ಲಾಸ್ಮೊಡಿಯಂ  ವೈವಾಕ್ಸ್ ಎಂಬ ಏಕಕೋಶ ಜೀವಿಯಿಂದ ಉಂಟಾಗುತ್ತದೆ.
2. ಆನೆ ಕಾಲು ರೋಗ:- (ಪೈಲಾರಿ ಸೀಸ್)
 ಇದು ಪೈಲೇರಿಯಾ ಎಂಬ ಪರೋಪ ಜೀವಿಯಿಂದ ಉಂಟಾಗುತ್ತದೆ.
3. ಅತಿಸಾರ ಬೇಧಿ :- 
ಎಂಟಮೀಬಾ ಎಸ್ಟೋಲಿಟಿಕಾ    ಎಂಬ ಆದಿಜೀವಿಯಿಂದ ಬರುತ್ತದೆ ಮತ್ತು  ಜಿಯೋಡ್ರಿಯಾ   ಏಕಕೋಶದಿಂದ ಬರುತ್ತದೆ.
 4. ನಿದ್ರಿಸುವ ಬೇನೆ :- ಟ್ರೈಪನೋಜೋಮ ಎಂಬ ಆದಿ ಜೀವಿಯಿಂದ ಬರುತ್ತದೆ.
 5. ಕಾಲ ಅಜಾರ್ :-   ಲೈಶ್ಮೆನಿಯಾ ಡೊನೊವನಿ  ಎಂಬ ಏಕ ಕೋಶ ಜೀವಿಯಿಂದ ಉಂಟಾಗುತ್ತದೆ.
ಶಿಲೀಂಧ್ರಗಳು  - Fungi
1. ರಿಂಗು ವರ್ಮ- (Ring worm) ಮೈಕ್ರೋಸ್ಪೋರಮ್ ಆಂಡ್ಯುನಿ  ಎಂಬ ಶಿಲಿಂಧ್ರದಿಂದ ಉಂಟಾಗುತ್ತದೆ .
2. ಅಥ್ಲೀಟ್ ಫೂಟ್ ಡಿಸೀಸ್ (Athlete fort disease)